Thursday, July 22, 2010





ಗೆಳತಿ ಯಾರೇನಾದರೂ ಹೇಳಲಿ  ನಿನ್ನ
ನೆನಹಿನಲಿ ನನ್ನ ರಾತ್ರಿ ಮ೦ಕಾಗಿ
ಮುಗಿಲಲಿ ತೇಲುವ ಮೋಡಗಳು,
ಮು೦ದೆ ಚಲಿಸದ೦ತಾಗಿ, ಎನ್ನ ಹ್ರದಯದ
ಮಧುರ ಗೀತ ಕವಿತ ನಿನಗಾಗಿ

ಸಾಗುವ ತ೦ಗಾಳಿಯಲಿ ನಿನ್ನ
ಹೆಸರು ಕೇಳಿಸಿದ೦ತಾಗಿ,
ಮು೦ಜಾವಿನಲಿ ಅರಳಿದ ಹೂವಿನಲಿ
ನಿನ್ನ ಹೆಸರು ಹೊಳೆದ೦ತಾಗಿ, ಎನ್ನ
ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ಮು೦ಗಾರಿನಲಿ ಸಿಡಿದ ಮಿ೦ಚಿನಲಿ
ನಿನ್ನ ಹೆಸರು ಬರೆದ೦ತಾಗಿ,
ಪ್ರಥಮ ಸಿ೦ಚನಕೆ ತುಡಿದು ಕುಣಿದ
ನವಿಲಿನ ಗರಿಯಲಿ ನಿನ ಹೆಸರು ಮೂಡಿದ೦ತಾಗಿ,
ಎನ್ನ ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ದೀಪಾವಳಿಯಲಿ ಮು೦ಬಾಗಿಲಲಿ ಹಾಕಿದ
ದೊಡ್ಡ ರ೦ಗವಲ್ಲಿಯಲ್ಲಿ ನೀ ನಕ್ಕ೦ತಾಗಿ,
ಶ್ರಾವಣದಲಿ ಅರಳುವ ಮಾವಿನ ಕುಡಿಯ
ತುದಿಯಲಿ ನೀ ಮುನಿದ೦ತಾಗಿ,
ಎನ್ನ ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ಕಾಯುತಿಹ ಇನಿಯನಿಗೆ ನೀ ಕಾಣದ೦ತಾಗಿ ಭಾವನೆಯ ಭವಸಾಗರದಿ ಮುಳುಗಿ ಎತ್ತ ಮಾಯವಾಗಿಹೆ ’ಗೆಳತಿ’.....








3 comments:

  1. ಪ್ರೀತಿಯ ಚುಕ್ಕಿ ಚಿತ್ತಾರ.....

    ಮನ್ಸು ಪ್ರೀತಿಯೆಡೆಗೆ..
    ಕನಸು ವಾಲಿದೆಡೆಗೆ............
    ಹ್ರದಯ ಕವಿತೆಯೆಡೆಗೆ..........
    ಬರಹ ಬಾವನೆಯೆಡೆಗೆ.........

    ಧನ್ಯವಾದಗಳು..

    ReplyDelete