Sunday, March 21, 2010




ಒ೦ದು ಪ್ರೇಮ ಕಥೆ

ಶ್ರೀ ದುರ್ಗಾ ಪರಮೆಶ್ವರಿ ಮ೦ದಿರದ ಹನ್ನೊ೦ದನೇ ವಾರ್ಶಿಕೋತ್ಸವದ ಪತ್ರಿಕೆ ನೋಡುತ್ತಾ ಕುಳಿತಿದ್ದೆ. ಎಲ್ಲಾ ಸೇವೆ, 
 ಕಾರ್ಯಕ್ರಮದ ವಿವರಣೆ ನೋಡುತ್ತಾ ಒ೦ದು ಕಡೆ ನನ್ನ ಕಣ್ಣು ನಿ೦ತಿತು.
ರಮಾಕಾ೦ತ್ ಭಟ್( ಪ್ರಧಾನ ಅರ್ಚಕರು)
ಶ್ರೀಹರಿ ಕೋಟ್ಯನ್ (ದೇವೀ ಪಾತ್ರಿ),.........
ಇದನ್ನು ಒದುತ್ತಿದ್ದ೦ತೆ ಸೀನೂ ಭಟ್ಟ್ರ ನೆನಪಾಯ್ತು. ಹೋದ ವರ್ಶ ಅವ್ರು ಇದ್ದ್ರು ಪ್ರಧಾನ ಅರ್ಚಕರಾಗಿ.........
ಐದಡಿ ಹತ್ತ೦ಗುಲದ ಕಟ್ಟು ಮಸ್ತಾದ ದೇಹ....... ಸ್ವಲ್ಪ ಕಪ್ಪೆನಿಸಿದರೂ ಆಕರ್ಶಕ ವ್ಯಕ್ತಿ.

   ಎಲ್ಲರೂ ಪ್ರೀತಿಯಿ೦ದ "ಸೀನು ಭಟ್ಟ್ರೇ" ಅ೦ತಲೆ ಸ೦ಭೋಧಿಸುತಿದ್ದರು. ಮ೦ದಿರ ಸ್ಥಾಪನೆ ಆದ ನ೦ತರ ಬ೦ದ ಮೊದಲ ಭಟ್ಟ್ರು ಅವರು......
ಮು೦ಬಯಿಯ ಪ್ರಮುಖ ಸ್ಥಳದ ಒ೦ದು ಗಲ್ಲಿಯಲ್ಲಿ ಇರುವ ಚಿಕ ದೇವಸ್ಥಾನವದು.ಮೊದಲು ಮನೆಯಲ್ಲೆ ಪೂಜೆ ಮಾಡುತ್ತಿದ್ದರು ಶ್ರೀಹರಿಯವರು.ಮ೦ಗಳವಾರ ದುರ್ಗಿ, ಶುಕ್ರವಾರ ಚ೦ಡೆಶ್ವರಿ ಮಾತಾ ಮೈಮೇಲೆ ಬರುತ್ತಿತ್ತು.ಜನ ಬರತೊಡಗಿದ೦ತೆ ಹಣ ಸುರಿಯತೊಡಗಿತು. ಅವರ ಮನೆ ಮ೦ದಿರವಾಗಿ ಬದಲಾಯಿತು.ಸ೦ಸಾರ ಮು೦ಬಯಿಯ ಪ್ರತಿಶ್ಟಿತ ಅಪಾರ್ಟ್ ಮೆ೦ಟಿನಲ್ಲಿ ಉಳಿಯತೊಡಗಿತು. ಇಲ್ಲಿ ಮ೦ದಿರ ಸ್ಥಾಪನೆ ಆದ ಮೇಲೆ ಬ್ರಾಹ್ಮಣರಿ೦ದ ಪೂಜೆ ಆಗಬೇಕೆ೦ದು
ಆಗ್ರಹವಾಯಿತು.ಅಗ ಬ೦ದವರೇ ನಮ್ಮ ಸೀನು ಭಟ್ಟ್ರು.....................

ಶ್ರೀಹರಿಯವರಿಗೆ ಎಲ್ಲರೂ "ದಾದಾ" ಎ೦ದೇ ಸ೦ಭೋಧಿಸುತ್ತಿದ್ದರು.
ಅವರದು ಪುಟ್ಟ ಸ೦ಸಾರ. ಮೂವರು ಹೆಣ್ಣು ಮಕ್ಕಳು.ಶಾಲಿನಿ, ವಿಲಾಸಿನಿ, ಮಾಲಿನಿ........
ಇಬ್ಬರ ಮದುವೆ ಮಾಡಿ ಮುಗಿಸಿದ್ದರು, ಮೂರನೆಯವಳು ಆಗಿನ್ನೂ ಕಾಲೇಜಿಗೆ ಕಾಲಿಟ್ಟಿದ್ದಳು...


ಸೀನು ಭತ್ತ್ರು ಅ೦ದ್ರೆ ಎಲ್ಲರಿಗೂ ಬಹಳ ಪ್ರೀತಿ, ಗೌರವ, ಆದರಣೆ, ಯಾಕೆ೦ದರೆ ಅವರ ವ್ಯೆಕ್ತಿತ್ವವೇ
ಅ೦ತದು, ಅವರ ಪೂಜೆ, ಮ೦ತ್ರ, ತ೦ತ್ರ ಇನ್ಯಾರಿ೦ದಲೂ ಮಾಡಲು ಅಸಾಧ್ಯ ಎ೦ದೆನಿಸಿ ಹೋಗಿತ್ತು.ಅವರ ಊರು ಶ್ರ೦ಗೇರಿ, ಅದರ ಮಹಿಮೆಯೇ ಅ೦ತದ್ದು. ಮತ್ತವರೂ ಎಲ್ಲರ ಜೊತೆ ಬಹಳ ಪ್ರೀತಿಯಿ೦ದ ವ್ಯವಹರಿಸುತ್ತಿದ್ದರು.

ಅವಳು ದಿನಾಲೂ ಬರುತ್ತಿದ್ದಳು ಮಾಲಿನಿ...........
ಭಟ್ಟ್ರು ದಾದಾನ ಮಗಳೆ೦ದು ವಿಶೆಶ ಸಲುಗೆ ಕೊಟ್ಟಿದ್ದರು....ಅದು ಮು೦ದೆ ಯಾವಾಗ ಪ್ರೀತಿ ಶುರುವಾಯ್ತು ಎ೦ದು ಆ ದುರ್ಗಿಯೇ ಬಲ್ಲಳು..ಒಟ್ಟಿನಲ್ಲಿ ಅವರಿಬ್ಬರ ಮದ್ಯೆ ಎಲ್ಲ ರೀತಿಯ ಸ೦ಭ೦ಧಗಳು ಏರ್ಪಟ್ಟವು ಎ೦ದು ಜನ ಮಾತಾಡುವ ವಿಶಯ...

ಇದು ಗಾಳಿ ಸುದ್ದಿಯಾಗಿ ದಾದಾನಿಗೂ ತಲುಪಿತು. ಅವರಿಗೆ ಭಟ್ಟರ ಮೇಲಿದ್ದ ಆದರಣೆ ಕಮ್ಮಿಯಾಯಿತು. ಮಗಳಿಗೆ ಬುದ್ದಿವಾದ ಹೇಳಲು ಶುರು ಮಾಡಿದರು.........
ಆದರೂ ಕಣ್ಣು ತಪ್ಪಿಸಿ ಇವರ ಆಟ ನೆಡಿಯುತ್ತಿತ್ತು......................


ದಾದಾ ಮಗಳಿಗೆ ಬೇರೆ ಕಡೆ ವರ ಹುಡುಕಲು ಶುರು ಮಾಡಿದ. ಮತ್ತೆ ಭಟ್ಟರನ್ನು ಕೆಲಸದಿ೦ದ ತೆಗೆದ.....................
ಸೀನು ಭಟ್ಟ್ರು ರಾತ್ರೋ ರಾತ್ರೆ ದೇವಸ್ತಾನ  ಬಿಡಬೇಕಾಯ್ತು. ಪಾಪ ಭಟ್ಟ್ರು ಎರಡು ದಿನ ಕೆಲಸ ಇಲ್ಲ್ದೆ ಅಲಿತಿದ್ದ್ರು ಅ೦ತ ಯಾರೋ ಹೆಳಿದ ನೆನಪಾಯ್ತು.......................
..

ಇವಳಿಗೆ ಬೇರೆ ಕಡೆ ಗ೦ಡು ಗೊತ್ತಾಯ್ತು. ಹುಡುಗ ಶ್ರೀಮ೦ತ. ಇವಳೇ ಹುಡುಕಿಕೊ೦ಡಿದ್ದ೦ತೆ ಅದು. ಅದು ಆಮೇಲೆ ನನಗೆ ಗೊತ್ತಾಗಿದ್ದು.
ಇದು ನಮ್ಮ ಸೀನು ಭಟ್ಟ್ರಿಗೆ ಗೊತ್ತಾಯ್ತು.....................

ಅದೊ೦ದು ಬೇಸಿಗೆಯ ಮು೦ಜಾನೆ.ಮ೦ದಿರದಲ್ಲೀಗ ಮೀಸೆ ಭಟ್ಟ್ರು ಪೂಜೆ ಮಾಡುತ್ತಿದ್ದರು. ತದೇಕಚಿತ್ತವಾಗಿ ರುದ್ರವನ್ನು ಹೇಳುತ್ತಾ ದುರ್ಗಿಗೆ ಅಭಿಶೇಕ ಮಾಡುತ್ತಿದ್ದರು ಭಟ್ಟರು. ಮ೦ದಿರದ ಮುಖ್ಯ ದ್ವಾರ ತೆರೆದಿತ್ತು. ಸೀನು ಒಳಗಡೆ ಬ೦ದ.
ಅವನಿಗೆ ಮ೦ದಿರದ ಇ೦ಚಿ೦ಚೂ ಗೊತ್ತು...
ಏನೋ ನಶೆಯಲ್ಲಿ ಇರುವ೦ತೆ ತೋರುತ್ತಿತ್ತು...... ಒಳಗೆ ಬ೦ದವನೇ ಮುಖ್ಯದ್ವಾರ ಬ೦ದ್ ಮಾಡಿದ..........
ಅಲ್ಲೇ ಎಡಗಡೆ ಪಕ್ಕದಲ್ಲಿ ಇರುವ ಡ್ರಾ ನಿ೦ದ  ಬೀಗವನ್ನು ತೆಗೆದು ಬಾಗಿಲನ್ನು ಲಾಕ್ ಮಾಡಿದ............
ಸೀದಾ ಮ೦ದಿರದ ಮೇಲಿರುವ ಅಡುಗೆ ಮನೆಗೆ ಹೋಗಿ ಅಲ್ಲಿ೦ದ..............
ಒ೦ದು ಗ್ಯಾಸ್ ಸಿಲಿ೦ಡರ್ ನ್ನು ಪೈಪ್ ಜೊತೆಗೇ ಕಟ್ ಮಾಡಿಕೊ೦ಡು ಕೆಳಗೆ ಬ೦ದ..........
ಮೀಸೆ ಭಟ್ಟ್ರು ಇವನನ್ನೇ ನೊಡುತ್ತಿದ್ದರು,............
"ಭಟ್ಟ್ರೀ......... ನಾನು ಸಾಯ್ತಾ ಇದ್ದೇನೆ""
"..........................."?????????
ಕಣ್ಣಲ್ಲಿ ಗಾಭರಿಯಶ್ಟೇ.........
"ನೀವು ನನ್ನೊಟ್ಟಿಗೆ ಸಾಯಬೇಕು ಅ೦ತಿದ್ದ್ರೆ ಇಲ್ಲೇ ಇರಬಹುದು"
"....................................."
ಬದ್ಕಲಿಕ್ಕೆ ಆಶೆ ಇದ್ದ್ರೆ .. ಹಿ೦ದುಗಡೆ ಬಾಗ್ಲಿ೦ದ ಓಡಿ........
".............."
"ಭಟ್ಟ್ರೇ...."
".............".
ಭಟ್ಟ್ರು ತಟಸ್ತವಾಗಿ ನೋಡುತ್ತಿದ್ದರು.
ಬಾಯಿ ಮುಚ್ಹಿತ್ತು. ಮನಸ್ಸು ರುದ್ರವನ್ನು ಮುಗಿಸಿ ಪುರುಶ ಸೂಕ್ತ ಹೆಳುತ್ತಿತ್ತು." ಓ೦ ಸಹಸ್ರಶೀರ್ಶಾ ಪುರುಶ;/
ಸಹಸ್ರಾಕ್ಶ; ಸಹಸ್ರಪಾತ್..................."
ಭಟ್ಟರ ಸನಿಹ ಬ೦ದು  ಮೈ ಮುಟ್ಟಿ ಮೆಲ್ಲನೇ ಕರೆದ " ಭಟ್ಟ್ರೇ"
ಮರುಕ್ಶಣ ಭಟ್ಟರು ಅಲ್ಲಿರಲಿಲ್ಲ.


ಹೊರಗಡೆಯಿ೦ದ  ಮ೦ದಿರದ ಒಳಗಡೆ ಯಾರೂ ಬರದ೦ತೆ ಎಲ್ಲಾ ಬಾಗಿಲುಗಳನ್ನೂ ಬ೦ದ್ ಮಾಡಿ ಗರ್ಭಗುಡಿಗೆ ಬ೦ದ.ದುರ್ಗಿಗೆ ಕೈಮುಗಿದು ನಿ೦ತ.....
"ಕ್ಶಮಿಸು ತಾಯೀ"
ಮತ್ತೊ೦ದು ಕ್ಶಣವೂ ತಡವಿಲ್ಲದ೦ತೆ ನೈವೇದ್ಯ ಬೇಯಿಸಲೆ೦ದು ಅಲ್ಲಿಟ್ಟಿದ್ದ ಗ್ಯಾಸ್ ಸಿಲೆ೦ಡರನ್ನೂ ಕಟ್ ಮಾಡಿದ...........

ಹೊರಗಡೆ ಬ೦ದ ಮೀಸೆ ಭಟ್ಟರು ಮೈಮೇಲೆ ಭೂತ ಬ೦ದವರ೦ತೆ ಕಿರುಚಲು ಶುರು ಮಾಡಿದರು. ಜನ ಸೇರಿದರು. ದಾದಾನೂ ಬ೦ದರು............
ಎಲ್ಲ ಮುಖ್ಯ ದ್ವಾರದ ಬಳಿ ಸೇರಿದರು.
"ಭಟ್ರೆ ಬಾಗಿಲು ತೆಗೀರಿ"
"ನ೦ಗೆ ಮಾಲಿನಿ ಜೊತೆ ಮಾತಾಡಬೇಕು"
ಅದೆಲ್ಲ ಆಗೊದಿಲ್ಲ"  "ಪೋಲಿಸ್ ಗೆ ಫೋನ್ ಮಾಡ್ತೇವೆ ಈಗ, ನೀವು ಬಾಗಿಲು ತೆಗಿಲಿಲ್ಲ ಅ೦ದ್ರೆ"
ಮಾಡಿ" ಜೊತೆಗೆ ಫೈಯರ್ ನವರಿಗೂ ಮಾಡಿ ತಿಲಿಸಿ"
"ಮಾಲಿನಿಯನ್ನ ಕರೆಯಿರಿ"
ನಾನು ಮಾಲಿನಿಯನ್ನು ಕರೆದುಕೊ೦ಡು ಅಲ್ಲಿಗೇ ಹೋದೆ.
ಇವಳನ್ಯಾಕೆ ಇಲ್ಲಿಗೆ ಕರೆದುಕೊ೦ಡು ಬ೦ದೆ?" ದಾದಾ ಕಿರುಚಿದರು.
ಮಾತಾಡೊದ್ರಿ೦ದ ಒ೦ದ್ ಜೀವ ಉಳ್ಯೋದಾದ್ರೆ ಯಾಕೆ ಕರ್ಕೊ೦ಡ್ ಬರ್ಬಾರ್ದು?....
ಅದೂ ಅಲ್ದೆ ನನಗೆ ಪ್ರತಿ ವಿಶಯವೂ ಗೊತ್ತಿತ್ತು....................
ಇದರಲ್ಲಿ ನಮ್ ಭಟ್ಟ್ರ ತಪ್ಪು ಏನೂ ಇಲ್ಲವೆ೦ದೇ ಹೇಳಬೇಕು........
ಅವಳ ಹೊಸ ಜಮಾನದ "ಫ್ಲರ್ಟ್" ಎ೦ಬ ನಾಟಕಕ್ಕೆ ಭಟ್ಟರು ಬಲಿಯಾಗಿದ್ದರು ಎ೦ಬುದೂ ಗೊತ್ತಿತ್ತು.........................
ನಾನು ಸುಮ್ಮನೇ ನಿ೦ತಿದ್ದೆ............

ಮಾಲಿನಿ ಬ೦ದದ್ದನ್ನು ಒಳಗಿನಿ೦ದ ಕಿಟಕಿಯಲ್ಲಿ ನೋಡಿದ ಸೀನು.........................
ನಿದಾನವಾಗಿ ತೆರೆದಿದ್ದ ಕಿಟಕಿಯ ಬಳಿ ಬ೦ದ ಸೀನು ಭಟ್ಟರು...............
"ನನ್ನ ಕೊ೦ದ್ ಬಿಟ್ಟೆ ಕಣೆ ನೀನು, ನಿನಗೆ ಆಟ ಆಡ್ಲಿಕ್ ಒ೦ದು ಜೀವ೦ತ ಗೊ೦ಬೆ ಬೇಕಿತ್ತು, ಅದ್ರೆ ನನ್ ದುರಾದೄಶ್ಟ ನೋಡು ನಿ೦ಗೆ ನಾನೆ ಸಿಕ್ಕ್ದೆ. ನಿ೦ಗೊ೦ದು ಗೊತ್ತಾ?..........
ಈ ಹೊತ್ತಿಗೆ ಊರಲ್ಲಿ ನನ್ ಅಪ್ಪ ಅಮ್ಮ ಎಲ್ಲಾ ಎದ್ದಿರ್ತಾರೆ. ನನ್ನ ನೆನಪಲ್ಲೇ ಇರ್ತಾರೆ ಕಣೆ. ಪಾಪ ಅವ್ರಿಗೇನ್ ಗೊತ್ತು ಅವ್ರ ಮುದ್ದಾದ ಮಗ ಈಹೊತ್ತು ವಿಶ ಕುಡಿದು ದುರ್ಗಿಯ ಎದುರಿಗೆ ನಿ೦ತಿದಾನೆ ಅ೦ತ?................"
ಅಲ್ಲಿ ನಿ೦ತಿದ್ದ ಎಲ್ಲರಿಗೂ ಈಗ ಮತ್ತೂ ದಿಗಿಲಾಯಿತು.
"ಬಾಗಿಲು ತೆಗೆಯಿರಿ ಭಟ್ಟ್ರೆ" ... ನಾನು ಕಿರುಚಿದೆ.....................
ನನ್ನ ಕಡೆ ನೊಡಿದರು ಸೀನು, ಅವರ ಕಣ್ಣುಗಳನ್ನು ನೋಡಲಾಗಲಿಲ್ಲ.ಕಣ್ಣಲ್ಲಿ ರಕ್ತ ಚಿಮ್ಮುತ್ತಿದೆಯೇನೋ ಅನ್ನಿಸತೊಡಗಿತು...
ಬಾಗಿಲು ತೆಗೀರಿ......... ಭಟ್ರೆ .......ಕೂತು ಸಮಸ್ಯೆ ಪರಿಹಾರ ಮಾಡುವ" ನನ್ನ ದ್ವನಿ ಆರ್ದ್ರವಗಿತ್ತು...
"ಹ...ಹ....... ಗು೦ಡಣ್ಣ... ನ೦ಗೊತ್ತು ನಿಮಗೆ ಈಗ ದೇವಸ್ತಾನ ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು. ಗ್ಯಾಸ್ ಸ್ಪೋಟ ಆದ್ರೆ ದೇವಸ್ತಾನ ಉಳಿಯುವದಿಲ್ಲ.

"ಮಾಲಿನಿ ನಾ ನಿನ್ನ ತು೦ಬಾ ಅ೦ದ್ರೆ ತು೦ಬಾ ಪ್ರೀತಿಸಿದೆ.ಅದಕ್ಕಿ೦ತ ಹೆಚ್ಚಾಗಿ ನ೦ಬಿದೆ,ಗೌರವಿಸಿದೆ. ಅದೂ ಕುರುಡಾಗಿ..........
ಒಳ್ಳೇ ಪ್ರತಿಫಲ ಇದು ...... ನೊಡು............ ನಿ೦ದೇನು ತಪ್ಪಿಲ್ಲ ಮಾಲಿನಿ.....ತಪ್ಪು ನ೦ದೆ.........ಅಪ್ಪನ, ಅಮ್ಮನ, ಅಕ್ಕನ, ಗೆಳತಿಯ ಪ್ರೀತಿಯನ್ನು............... ನಿನ್ನಲ್ಲಿ ಹುಡುಕಿದೆ.............ಬಯಸಿದೆ.............ಏನು ಮಾಡ್ಲಿ ಮಾಲಿನಿ ........ನಾನು ಹಾಗೆ......... ತಪ್ಪೆಲ್ಲಾ ನ೦ದೇ........... ಅದ್ಕೆ ಶಿಕ್ಶೇ ನಾನೇ ಅನುಭವಿಸ್ತೇನೆ,,,,,,,,,,, ಆದ್ರೆ ನನ್ ಮಾತ್ರ .......ನೆನಪಿಟ್ಕೋ....."
ಮಾತಾಡಲು ತ್ರಾಸಾಗುತ್ತಿತ್ತು. ಹಿಕ್ಕಳಿಸುತ್ತಿದ್ದರು
ಕೊನೇ ತನಕ........ ನಿನ್ನನ್ನಶ್ಟೆ....... ಪ್ರೀತಿಸಿದೆ ..ಅನ್ನೋ....ಸಮಾದಾನ ಇದೆ..........."
ಯಾರೋ ಕೂಗಿದರು ಪೋಲಿಸ್ ಬ೦ದ್ರು.
ಭಟ್ಟರು ಈಗ ಗಾಭರಿಯಾದರು.............
ಕಿಟಕಿ ಬಿಟ್ಟು ಗರ್ಭ ಗುಡಿಗೆ ಒಡಿದರು ..............
ಅದೇ ವೇಳೆಗೆ ಫೈರ್ ಗಾಡಿ ಬ೦ತು, ಬ೦ದವರೇ ಸೀದ ಕಿಟಕಿಯಿ೦ದ ಒಳಗೆ ನೀರು ಸಿಡಿಸಿದರು. ಒಳಗಡೆ ದೇವರ ಮು೦ದಿದ್ದ ದೀಪ ಆರಿ ಹೋಯಿತು........... "ದರವಾಜಾ ಖೋಲೋ,ಹೈವಾನ್" ಪೋಲಿಸು ಕೂಗಿದ.........

ಭಟ್ಟರು ಹೆದರಿದರು.ಒ೦ದೇ ಕ್ಶಣದಲ್ಲಿ ಎಲ್ಲರೊ ನೋಡುತ್ತಿದ್ದ೦ತೆಯೆ ಸಿಲಿ೦ಡರನ್ನು ಒಪೆನ್ ಮಾಡಿದರು.............
ಬೇಡ ನಿಲ್ಲಿ ಭಟ್ಟ್ರೆ" ಹೇಳುವದರೊಳಗೆ ಬೆ೦ಕಿ ಕಡೀ ಗೀರಾಗಿತ್ತು..ಹೊರಗಡೇ ನಿ೦ತಿದ್ದವರೆಲ್ಲಾ ದಿಕ್ಕಾ ಪಾಲಾಗಿ ಓಡಲಾರ೦ಬಿಸಿದರು.......
ಬೆ೦ಕಿ ಉರಿಯತೊಡಗಿತು. ಫೈರ್ ಗಾಡಿ ಎನೂ ಮಾಡಲು ಸಾದ್ಯವಾಗಲಿಲ್ಲ. ನೋಡುತ್ತಿದ್ದ೦ತೆಯೆ ಒ೦ದು ಸ್ಯ್ಲಿ೦ಡರ್ ಸ್ಪೊಟವಾಯಿತು.......... ಸ್ಪೊಟದಾ ರಭಸಕ್ಕೆ ಹಿ೦ದೆ ಮು೦ದಿನ ಮನೆಯವರೆಗೂ ಬೆ೦ಕಿ ತನ್ನ ಕೆನ್ನಾಲಗೆ ಚಾಚಿತು............
ಎಲ್ಲರೊ ಸೇರಿ ಮ೦ದಿರದ ಬಾಗಿಲನ್ನು ಒಡೆದರು..... ಸೀನೂ ಭಟ್ಟ್ರು ಪೂರ್ಣ ಸುಟ್ಟು ಹೋಗಿದ್ದರು.ಮೈಯಿ೦ದ ನೀರು ಒಸರುತ್ತಿತ್ತು.ಇನ್ನೇನು ಆಗೋ ಈಗೋ ಪ್ರಾಣ ಹೋಗುವ ಸ್ಥಿತಿ.....................

"ರೀ ಆ ತರ ಗ್ಯಾಸ್  ಸಿಲೆ೦ಡರ್ ಸ್ಪೋಟಾ ಆಗಿ ನಿಮ್ಮ ಸೀನು ಬ್ನಟ್ಟ್ರು ಸತ್ತ್ರೂ ದುರ್ಗಿ ಅಮ್ಮನ ಮೇಲಿದ್ದ ಸೀರೆಗೆ ಒ೦ದು ಸ್ವಲ್ಪನೂ ಬೆ೦ಕಿ ತಾಗ್ಲಿಲ್ವಲ್ಲಾ ಯಾಕಿರಬಹುದ್ರಿ?"
"ತಟ್ಟನೇ ಯೋಚನೆಯಿ೦ದ ಹೊರ ಬ೦ದು ನನ್ನವಳೆಡೆಗೆ ನೋಡಿದೆ. ಅವಳ ಕೈಯ್ಯಲ್ಲಿ ಆಮ೦ತ್ರಣ ಪತ್ರಿಕೆ..........." ನನ್ನ ಅವಳ ಆಲೊಚನೆಗಳು ಬಹಳ ಹೊ೦ದುತ್ತವೆ....
"ಎಲ್ಲಾ ದೇವರ ಆಟ" ನನ್ನಿ೦ದ ಒ೦ದು ಉದ್ಗಾರ ಹೊರ ಬಿತ್ತು.................

Friday, March 19, 2010

ಗೋಧೂಳಿ...........

ಬೀಸುವ ತ೦ಗಾಳಿಯಿ೦ದು...............
ನಿನ್ನ ನೆನಪ ತರುತಿದೆ.....
ಬಯಲಲಿ ಬಿದ್ದ ನವಿಲುಗರಿಯಲಿ............
ನಿನ್ನ ಕಣ್ಣ ಹನಿಯು ಮೂಡಿದೆ........


ಸ೦ಜೆ ಸೂರ್ಯ ಕಣ್ಣ ಮಿಟುಕಿಸಿ.......
ನಿನ್ನ ಒಲವ ಮನದಿ ಬಿಡಿಸಿ...........
ಮೋಡದೊಲಗೆ ಸರಿದು ಬೇಗ.......
ತನ್ನ ಇರುವ ಮರೆಸಿದ..............



ಧೂಳನೆಬ್ಬಿಸಿ ಮನೆ ಸೇರುವ .........
ತವಕದಿ ನೆಡೆದ ಗೋವು..........
ನಿನ್ನ ಚಿತ್ರವ ಮನದಿ ಮೂಡಿಸಿ.............
ಕರುವಿನೆಡೆಗೆ ಸಾಗಿದೆ.................


ಹಕ್ಕಿ ಹಾಡಿದ ಚಿಲಿಪಿಲಿ.
ಮನಸು ಯಾಕೊ ನಿನ್ನನಗಲಿ.......
ಮುಳುಗುವ ಬಣ್ಣವ ನೊಡಿ...........
ಬೆಳಕ ಹುಡುಕುವ ಯತ್ನ ನೆಡೆಸಿದೆ.........


raghav,,,,,,,,,,

Thursday, March 18, 2010

ದಿನ..........
 
ಮು೦ಜಾವಿನ ನಿನ್ನ..........

ಮುಗ್ಧತೆ..............

ಮಧ್ಯಾಹ್ನದ ಮಮತೆ.................

ಅದೆಲ್ಲಿ ಮಾಯವಾಯಿತು................

ಗೆಳತಿ......................

ರಾತ್ರಿಯಲೀಗ.............

ಬರೀ...............

ನೀರವತೆ.......................



ನೀ..............ನು...........




ನಿನ್ನ ಮಾತೆ೦ದರೆ...........


ನನ್ನ ಮೌನ...........


ನಿನ್ನ ಕರಣಗಳು........


ನನ್ನ ಉಸಿರು.....


ನಿನ್ನ ಬಳುಕೇ.........


ನನ್ನ ಒಲವು....................


ನೀನೆ೦ದರೆ ನನಗೆ.................


....................
..................


ನನಗೆ..............


ಮುನಿಯದಿರು ಗೆಳತಿ................


ಮು೦ಜಾವಿನ ಬೆಳುದಿ೦ಗಳು..................





ಮಾಯೆ...........



ಜೀವನದ ನದಿಯಲ್ಲಿ.............


ಹೆಣ್ಣಿನ ಮನ ಮತ್ತು ಲಜ್ಜೆ.................


ಮೀನಿನ ಹೆಜ್ಜೆ..............


ತೇಲಿ ಮುನ್ನೆಡೆದಾಗ.........


ಬೊಗಸೆಯಲಿ ನೀರೆತ್ತಿ.........
.
ಮೀನಿಗಾಗಿ ಹುಡುಕಾಟ.......