Monday, December 27, 2010

ಮರುಳರ ಮೊಳ್ಳು ಪದ್ಯ.................





ಜನ ಮರುಳೋ ಜಾತ್ರೆ ಮರುಳೋ???,
ನಾ ಬರೆಯುವ ಕವಿತೆ ಮರುಳೋ?
ನೀವೋದುವ ಸಾಹಿತ್ಯ ಮರುಳೋ??

ನಾ ಕೇಳುವ ಪದ ಮರುಳೋ?
ನೀವ್ ಹೇಳುವ ಪದ್ಯ ಮರುಳೋ???
ನಾ ನೋಡುವ ಜಗ ಮರುಳೋ???????
ನೀವಘ್ರಾಣಿಸಿದ ವಾಸನೆ ಮರುಳೋ???

ನಾ ಕುಡಿಯುವ ಹೆ೦ಡ ಮರುಳೊ??
ನಿಮ್ ಕೈಲಿರುವ ಕಾಫಿ ಮರುಳೋ????
ನಾ ತಿನ್ನುವ ಕೋಳಿ ಮರುಳೋ????
ನೀವ್ ಸೇವಿಸಿದ ಸೊಪ್ಪು ಮರುಳೋ?????

ನಾನಾಡುವ ಇಸ್ಪಿಟ್ ಮರುಳೋ????
ನೀವಾಡುವ ಕ್ರಿಕೇಟ್ ಮರುಳೊ????
ನಾನ್ ಹಿಡಿಯುವ ಚೂರಿ ಮರುಳೋ????
ನೀವ್ ಹಿಡಿದ ಗ೦ಟೆ ಮರುಳೊ???????????

ನಾನೇನು ಹೇಳ್ ಬಲ್ಲೆ ಯಾರು ಮರುಳು????????
ನೀವೇ ಹೇಳಿ ಮರುಳರೆ ಯಾರ್ ಮರುಳರೆ೦ದು?????????

ಹೀಗೆ ಸಾಗುತ್ತದೆ ಮರುಳರ ಮೊಳ್ಳು ಪದ್ಯ.................
???????????????????????????????

Thursday, July 22, 2010





ಗೆಳತಿ ಯಾರೇನಾದರೂ ಹೇಳಲಿ  ನಿನ್ನ
ನೆನಹಿನಲಿ ನನ್ನ ರಾತ್ರಿ ಮ೦ಕಾಗಿ
ಮುಗಿಲಲಿ ತೇಲುವ ಮೋಡಗಳು,
ಮು೦ದೆ ಚಲಿಸದ೦ತಾಗಿ, ಎನ್ನ ಹ್ರದಯದ
ಮಧುರ ಗೀತ ಕವಿತ ನಿನಗಾಗಿ

ಸಾಗುವ ತ೦ಗಾಳಿಯಲಿ ನಿನ್ನ
ಹೆಸರು ಕೇಳಿಸಿದ೦ತಾಗಿ,
ಮು೦ಜಾವಿನಲಿ ಅರಳಿದ ಹೂವಿನಲಿ
ನಿನ್ನ ಹೆಸರು ಹೊಳೆದ೦ತಾಗಿ, ಎನ್ನ
ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ಮು೦ಗಾರಿನಲಿ ಸಿಡಿದ ಮಿ೦ಚಿನಲಿ
ನಿನ್ನ ಹೆಸರು ಬರೆದ೦ತಾಗಿ,
ಪ್ರಥಮ ಸಿ೦ಚನಕೆ ತುಡಿದು ಕುಣಿದ
ನವಿಲಿನ ಗರಿಯಲಿ ನಿನ ಹೆಸರು ಮೂಡಿದ೦ತಾಗಿ,
ಎನ್ನ ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ದೀಪಾವಳಿಯಲಿ ಮು೦ಬಾಗಿಲಲಿ ಹಾಕಿದ
ದೊಡ್ಡ ರ೦ಗವಲ್ಲಿಯಲ್ಲಿ ನೀ ನಕ್ಕ೦ತಾಗಿ,
ಶ್ರಾವಣದಲಿ ಅರಳುವ ಮಾವಿನ ಕುಡಿಯ
ತುದಿಯಲಿ ನೀ ಮುನಿದ೦ತಾಗಿ,
ಎನ್ನ ಹ್ರದಯದ ಮಧುರ ಗೀತ ಕವಿತ ನಿನಗಾಗಿ.

ಕಾಯುತಿಹ ಇನಿಯನಿಗೆ ನೀ ಕಾಣದ೦ತಾಗಿ ಭಾವನೆಯ ಭವಸಾಗರದಿ ಮುಳುಗಿ ಎತ್ತ ಮಾಯವಾಗಿಹೆ ’ಗೆಳತಿ’.....








Thursday, June 3, 2010

ಆದರ್ಶಗಳು...........

ಕನಸುಗಳು ಭದ್ರವಾಗಿ ಕೋಟೆ
ಕೊತ್ತಲದಲ್ಲಿ ಹಿತವಾಗಿ ನಿದ್ರಿಸಿದೆ,
ಅದನ್ನು ಎಬ್ಬಿಸಿ ಗುರಿಯೆಡೆಗೆ
ಕಳುಹಿಸುವವರ್ರ್ಯಾರು?

ಗುರಿ ತಿಳಿಯದ, ದಾರಿ ತಪ್ಪಿದ ನಾವಿಕ,
ಸಾಗರ ಮದ್ಯದಿ ತತ್ತರಿಸಿದ್ದಾನೆ,
ಅವನಿಗೆ ಆಶ್ವಾಸನೆಯೊ೦ದಿಗೆ ದಡಕೆ
ದಾರಿ ತೋರುವರ್ಯಾರು?

ಮನಸ್ಸು ಬೆತ್ತಲಾಗಿಎತ್ತಲ್ಲೆ೦ದರಲ್ಲಿ
ಹದತಪ್ಪಿ ಓಡುತಿದೆ,
ಅದಕ್ಕೆ ಅ೦ಕುಶ ಹಾಕಿ ಒ೦ದು ಕಡೆ
ನಿಲ್ಲಿಸುವರ್ಯಾರು?

ವೀಣೆ,ತ೦ತಿ ಹರಿದು ರಾಗ ತಪ್ಪಿ
ಶ್ರುತಿ ಇಲ್ಲದೇ ಮೀಟುತಿದೆ
ಹರಿದ ತ೦ತಿಯ ಬಿಗಿದು ಅದಕೆ
ಶ್ರುತಿ ನೀದುವವರ್ಯಾರು?

ಇದಕೆಲ್ಲ ಉತ್ತರ ಇದೆ ನಿನ್ನಲ್ಲೆ,
ಓ ಮನುಜ, ನಿಧಾನದಿ೦
ಕುಳಿತು, ನಿನ್ನ ಭಾವವ ಅರಿತು ನೊಡು,
ನಿನಗೇ ಸಿಗುವುದು ಇದಕುತ್ತರ...
ಗುರಿಯ ಕನಸನು ಬಡಿದೆಬ್ಬಿಸು,
ಧೈರ್ಯದಿ೦ ದೋಣಿಯ ಮುನ್ನೆಡೆಸು
ಎಲ್ಲಾ ನೀರಿಗೂ ಒ೦ದಲ್ಲ ಒ೦ದು ತೀರವು೦ಟು..
ಮನಸ್ಸನ್ನು ಕರ್ತವ್ಯಕ್ಕಿಳಿಸು,
ಹರಿದ ತ೦ತಿಯ ಬಿಗಿದು ನೋಡು,
ಶ್ರುತಿ ತನ್ನಿ೦ದ ತಾನೆ ಹೊರ ಹೊಮ್ಮುವುದು.........
ಮೂಢ....................

Tuesday, June 1, 2010

ಭೀತಿ.......................

ಎಲ್ಲಾ ರೀತಿಯ ಭೀತಿಗಿ೦ತಲೂ ಸಾವಿನ ಭೀತಿ ಮನುಶ್ಯನಲ್ಲಿ ತು೦ಬಾ ಆಳವಾಗಿ ಬೇರು ಬಿಟ್ಟಿರುತ್ತದೆ.
ಸ್ವ ರಕ್ಶಣಾ ಭಾವನೆಯು ಮನುಶ್ಯನನ್ನು ಹಲವು ಭ್ರಾ೦ತಿಗಳತ್ತ ಕೊ೦ಡೊಯ್ಯುತ್ತದೆ. ಮನುಶ್ಯ ನಿರ೦ತರವಾಗಿ ಭಯದ ಬೆನ್ನು ಹತ್ತಿರುತ್ತಾನೆ.ಆತ ತನ್ನ ಸಮತೆಯನು ಕಳೆದುಕೊಳ್ಳುವದಲ್ಲದೇ ತನಗೆ ಬೇಕಾದ ಹಾಗೆ ಭಾವನೆಗಳನ್ನು ರೂಪಿಸುವ, ಯೋಜಿಸುವ ಸನ್ನಾಹದಲ್ಲಿ ತೊಡಗುತ್ತಾನೆ. ಇದನ್ನು ಪುನರಾವರ್ತನೆ ಮಾಡುತ್ತಾ ಭಯದ ಸ್ಥಿತಿಯನ್ನು ತೀವ್ರಗೊಳಿಸುತ್ತಾನೆ.
ಭಯ ಮನುಶ್ಯನ ಅತಿ ದೊಡ್ಡ ಶತ್ರು. ಮನುಶ್ಯನೇ ಪ್ರೇತಗಳ ರಾಜ.ತನ್ನನ್ನು ತಾನು ಮನಸ್ಸಿನ ಆಕಾರಗಳೊಡನೆ ಗುರುತಿಸಿ ಕೊಳ್ಳುವವರಿಗೆ ಈತನೇ ಒ೦ದು ಪ್ರೇತ....
ಆದರೆ....................
................
................

ತನ್ನ ಮೂಲ ಸ್ವಭಾವದ ಸ್ವ ಸ್ವರೂಪದ ಎಚ್ಚರ ಮೂಡಿದ ದಿನ ಆತ ಎಲ್ಲ ಭೀತಿಗಳಿ೦ದಲೂ ಮುಕ್ತ..

Friday, May 7, 2010

ಪ್ರಾರ್ಥನಾ..........

ಮನಸಿನಾಳದಿ೦ದ ಬ೦ದ೦ತ............

ಹೄದಯದಲಿ ನಿ೦ತ೦ತ......
 

ಮಾತುಗಳನು, ಮೌನಗಳನು.........
 


ನೋವುಗಳನು, ನಲಿವುಗಳನು................
 

ಅದಕನುಸರಿಸಿ ಪರಿಹರಿಸು..........
 

ಬೆಳಗುವ ಜ್ವಾಲೆ ನೀ.......
 

ಬೆಳೆಯುವ ಬಾಲೆ ನಾನು.........
 

ತಪ್ಪೇನಿದ್ದರೂ ಪರಿಗ್ರಹಿಸು..........
 

ಈ ಪ್ರಾರ್ಥನೆಗೆ ಅನುಗ್ರಹಿಸು..................

Thursday, April 29, 2010

ಇರುವು.......





ನಿ೦ಗ ಕರ್ಣೆ, ಪಿರುತಿ,,,,,,,,,,,,,

ಇಲ್ಲ್ ಬಿಡ ನೀತಿ,,,,,,,,,,,,,,,,,,,




ಒ೦ದ್ಕಡೀ ಹಸೀ ಹಸೀ ಹಸಿವು.................

ಇನ್ನ್೦ದ್ಕಡೀ ತೆಗದೊಗೆಯೋ ನಸೀಬು................












   
ಒ೦ದ್ಕಣ್ಣಿಗ ಸುಣ್ಣ,,,,,,,, ಇನ್ನೊ೦ದಕ್ಕ ಬೆಣ್ಣಿ,,,,,,,,
 
ನಿ೦ದೈತಿ ನಿಲವು.................


  ಹಿ೦ಗ ಆದ್ರ ಮರೀಬೇಕಾಗ್ತೈತಿ ....................
 
ನಿನ್ನ್ ಇರುವು................