Sunday, April 4, 2010

ನಮ್ಮಜ್ಜಿಯ ಒರಳು...........




ಚ೦ಚಲವೀ ಚಿತ್ತ.........
ಹಿಡ್ಕೊ೦ಡು ಬೆತ್ತ.............
ಹೇಳಿದರೂ ಮೆತ್ತ..........
ಓಡುತಿದೆ ಎತ್ತ?...........

ಬೇಕೆ೦ಬ ಮಾತೇ ಮದಿರ.............
ಕಾಣುತಿದೆ ಅದೇ ಎದಿರ......
ಸೂರ್ಯ ಸ೦ಜೆಗೇ ಸರಿದ.............
ಮು೦ಜಾನೆಯ ಮಾತನ್ನು ಮುರಿದ.............

ನೆನಪಾದಳು ಮತ್ತವಳು...........
ಚಿಕ್ಕ ದೀಪದೊಳು............
ಮುಳು ಮುಳು ಅಳು..................
ಎಸಳು ಎಳಸು ಏಳೇಳು................
ಭವ ಸಾಗರದಿ ಮುಳುಗೇಳು.................
ಮುಗಿಯದೀ ಮುಗುಳು...............
ಸರಿಯಿತೀ ಇರುಳು...............
ಮು೦ಜಾನೆವರೆಗೆ ಅರಳು-ಮರುಳು...........
ಇದು ನಮ್ಮಜ್ಜಿಯ ಒರಳು...
........

1 comment:

  1. ತುಂಬಾ ಚಂದದ ಕವನ....
    ಇಷ್ಟವಾಯಿತು...

    ಚಂದದ ಸಾಲುಗಳಿಗೆ ಅಭಿನಂದನೆಗಳು...

    ReplyDelete